Wednesday, March 6, 2013

ಅರ್ಕಾವತಿ ನದಿ ಪುನಶ್ಚೇತನ ಕಾಮಗಾರಿಯ ಪರೀಕ್ಷಾ ವರದಿ

ಅರ್ಕಾವತಿ ನದಿ ಪುನಶ್ಚೇತನ ಕಾಮಗಾರಿಯ  ಪರೀಕ್ಷಾ ವರದಿ


ಸತತ ಹಲವಾರು ವರ್ಷಗಳ ಜನರ ಹೋರಾಟದ ಫಲವಾಗಿ ಕರ್ನಾಟಕ ಸರ್ಕಾರ ಕಡೆಗೂ ಎಚ್ಚೆತ್ತು 2012.13ನೇ ಸಾಲಿನಲ್ಲಿ ಕಾವೇರಿ ನೀರಾವರಿ ನಿಗಮದ ಮೂಲಕ 22.43 ಕೋಟಿ ರೂ ವೆಚ್ಚದ ಟೆಂಡರ್ ಕರೆದು ಅರ್ಕಾವತಿ ನದಿ ಪುನಶ್ಚೇತನ ಯೋಜನೆಯನ್ನು 3 ಹಂತಗಳಾಗಿ ವಿಭಜಿಸಿ ಜಾರಿ ಮಾಡಿದೆ.
ಮೊದಲ ಹಂತ ನಂದಿ ಬೆಟ್ಟದಿಂದ ಹೆಸರಘಟ್ಟ ಕೆರೆಯವರೆಗೂ 8.10. ಕೋಟಿ ಎರಡನೇ ಹಂತ ಕುಮುದ್ವತಿ ಉಗಮ ಸ್ಥಾನದಿಂದ ತಿಪ್ಪಗೊಂಡನಹಳ್ಳಿಯವರೆಗೂ7.85 ಕೋಟಿ, ಮೂರನೇ ಹಂತ  ಹೆಸರಘಟ್ಟದಿಂದ ತಿಪ್ಪಗೊಂಡನಹಳ್ಳಿಯವರೆಗೂ 6.85ಕೋಟಿ ಈ ಯೋಜನೆಯು ಪ್ರಮುಖವಾಗಿ 400 ಕೆರೆಗಳ ರಾಜಕಾಲುವೆಗಳ ಮತ್ತು ಕೋಡಿ ಕಾಲುವೆಗಳ ಹೂಳುತೆಗೆದು ಕೆರೆಗಳಿಗೆ ಸರಾಗವಾಗಿ ನೀರು ಹರಿದುಬಂದು ಹೆಸರಘಟ್ಟ ಮತ್ತು ತಿಪ್ಪಗೊಂಡನಹಳ್ಳಿ ಜಲಾಶಯಗಳಿಗೆ ನೀರು ಬಬೇಕೆಂಬ  ಆಶಯವನ್ನು ಹೊಂದಿದೆ.
 ಆದರೆ ಎಷ್ಟೇ ಒಳ್ಳೆಯ ಆಶಯಗಳನ್ನು ಹೊಂದಿದ್ದರೂ ಕಾಮಗಾರಿಗಳು ಸಂಪೂರ್ಣ ಯಶಸ್ವಿಯಾಗದ ಹೊರತು ಪುನಶ್ಚೇತನ ಸಾಧ್ಯವಿಲ್ಲ. ಹಾಗಾಗಿ ಈ ಯೋಜನೆಗೆ ಸ್ಥಳೀಯರ ಬೆಂಬಲ ಸಿಗುವಂತಾಗಬೇಕೆಂದು ನಿಗಮದಿಂದ ಅಂದಾಜು ಮೊತ್ತದ ಪ್ರತಿ ಪಡೆದು  ಕರಪತ್ರಗಳನ್ನು ದಾನಿಗಳ ನೆರವಿನಿಂದ ಮುದ್ರಿಸಿ ಮೊದಲ ಹಂತದ ಹಳ್ಳಿಗಳಿಗೆ ಹಂಚಿದ್ದು  ಆಗಿತ್ತು,








ಕರಪತ್ರ ತಲುಪಿದ ಹಳ್ಳಿಗಳಿಂದ ಕಾಮಗಾರಿಯ ಗುಣಮಟ್ಟದ ಬಗ್ಗೆ ಅಸಮದಾನ ಹೊಂದಿದ್ದ ಸಮುದಾಯ ಪ್ರತಿನಿಧಿಗಳ ಕರೆಗಳು ಬರಲಾರಂಭಿಸಿದವು, ಹಾಗಾಗಿ ಸಮುದಾಯದವರ ಜೊತೆ ಒಂದು ಕಾಮಗಾರಿಯ ಗುಣಮಟ್ಟದ ಪರೀಕ್ಷಾ ಮಾಡುವ   ಅನ್ನೋ ನಿರ್ಧಾರಕ್ಕೆ ಸಮಿತಿ ಬಂತು, ಇದರ ಬೆನ್ನಲ್ಲೇ ಹಲವಾರು ಕಡೆ ನೋಡಿದಾಗ ಗುಣಮಟ್ಟದಲ್ಲಿ ಕೊರತೆ ಕಾಣಿಸಿತು.




ಇದರಿಂದಾಗಿ ದಿನಾಂಕ 15.12.12ರಂದು ದಿನಾಂಕ ಮತ್ತು ಸ್ಥಳ ನಿಗದಿ ಪಡಿಸಿಕೊಂಡು ಅರ್ಕಾವತಿ ಸಮಿತಿ, ರೈತ ಸಂಘಟನೆಗಳ ಪದಾಧಿಕಾರಿಗಳು, ಮತ್ತು ಸ್ಥಳೀಯ ಜನರ ಜೊತೆ ಜೊತೆ ನಿಗಮದ ಇಂಜಿನಿಯರ್  ಗಳಿಗೆ ಮೊದಲೇ ತಿಳಿಸಿದ್ದರಿಂದ ಅವರು ಸೊಣ್ಣೇನಹಳ್ಲೀಯಿಂದ ದೊಡ್ಡಹೆಜ್ಜಾಜಿಗೆ ಹೋಗುವ ಕಾಲುವೆ ಕಾಮಗಾರಿ ಮುಗಿದಿದೆ ಪರಿಶೀಲನೆ ಮಾಡಿ ಅಂತ ಅಂದ್ರು , ಹಾಗಾಗಿ ಅಲ್ಲಿಗೆ ಹೋದ್ವಿ, ಅಲ್ಲಿ ಕಾ,ನೀನಿ,ದ ಇಂಜಿನಿಯರ್ ಗೋಪಾಲ್ ಮತ್ತು ಗುತ್ತಿಗೆದಾರರ ಕಡೆಯ  ಇಂಜಿನಿಯರ್ ಪ್ರಕಾಶ್ ಇದ್ರು ಮೊದಲಿಗೆ ಆ ಸ್ಥಳದ ಬಗ್ಗೆ ಮತ್ತು ಕಾಮಗಾರಿಗೆ ಸಂಬಂದಿಸಿದ ದಾಖಲೆಗಳನ್ನು ಕೇಳಿದಾಗ ಅದು ಅವರ ಬಳಿ ಇರಲಿಲ್ಲ , ಆ ಕಾಮಗಾರಿಯ ಬಗ್ಗೆ ಸಮಿತಿಯ ಕಾರ್ಯದರ್ಶಿಗಳಾದ ಶ್ರೀ ಎಂ ಆರ್ ಸೀತಾರಾಂ ಕೇಳಿದ ಯಾವೊಂದು ಪ್ರಶ್ನೆಗಳಿಗೂ ಅವರ ಬಳಿ ಸ್ಪಷ್ಟ ಉತ್ತರ ಸಿಗಲಿಲ್ಲ


ನಾವೆ ಟೇಪ್ ಹಿಡಿದು ಅಳತೆ ಮಾಡಿದಾಗ 4ಮೀಟರ್ ಅಗಲದಲ್ಲಿ ಎರಡೂ ಕಡೆ ಲೆಕ್ಕ ಹಾಕಿದ್ರು ಎರಡು ಅಡಿ ಮಾತ್ರ ಮಣ್ಣು ಹೊರಗೆ ಹಾಕಿದ್ರು ಇವುಗಳ  ಆಧಾರದಲ್ಲಿ ಇಡೀ ಆ ಸ್ಥಳದ ಕಾಮಗಾರಿಯ ಗುಣಮಟ್ಟ ಬರಿ 12 % 20% ಅಷ್ಟೆ ಆಗಿತ್ತು , ಆಗ ಗೋಪಾಲ್ ಇನ್ನೂ ಈ ಸ್ಥಳದಲ್ಲಿ ಕಾಮಗಾರಿ ಬಾಕಿ ಇದೆ ಅಂತಂದ್ರು, ಆಗ ಅಲ್ಲೇ ಇದ್ದ ಸಿಪಿಎಂ ನ ಚಂದ್ರ ತೇಜಸ್ವಿಯವರು ಕಡೆಗೆ ಇದು ಆಗುವ ಹೋಗುವ ಕೆಲಸ ಅಲ್ಲ ಹಾಗಾಗಿ ಕಾವೇರಿ ನೀರಾವರಿ ನಿಗಮದ ಕೇಂದ್ರ ಕಛೇರಿಗೆ ಭೇಟಿ ನೀಡಿ ವ್ಯವಸ್ಥಾಪಕ ನಿರ್ಧೇಶಕರ ಜೊತೆ ಮಾತಾಡುವ ಅಂದ್ರು

ಅದಕ್ಕೆ ಗೋಪಾಲ್ ಸಹ ನಮ್ಮ ಬಳಿ ಇರೋದು ಇಷ್ಟೆ ದಾಖಲೆಗಳು ಹಾಗಾಗಿ ಇನ್ನುಳಿದ ದಾಖಲೆಗಳನ್ನು ನಿಗಮದಿಂದ ಪಡೆದುಕೊಳ್ಳಿ ಅಂತ ಅಂದ್ರು
ಅದಕ್ಕೆ ಸಮಿತಿಯ ಕಾರ್ಯದರ್ಶಿ ಸೀತಾರಾಂ ವ್ಯವಸ್ಥಾಪಕ ನಿರ್ಧೇಶಕರನ್ನು ಸಂಪರ್ಕ ಮಾಡಿ ಸಭೆ ಕರೆಯುವಂತೆ ಮತ್ತು ಅಂದು ಅಗತ್ಯ ದಾಖಲೆಗಳು ಮತ್ತು ಅಧಿಕಾರಿಗಳ ಹಾಜರಿಯನ್ನು ಕೋರಲಾಗಿದೆ

ಇದಕ್ಕೆ ಪೂರಕವಾಗಿ ಪ್ರತಿಕ್ರಿಯೆ ನೀಡಿದ ನಿರ್ಧೇಶಕರು ದಿನಾಂಕ 7.01.2013ರಂದು ಕಾವೇರಿ ನೀರಾವರಿ ನಿಗಮದ ಕೇಂದ್ರ ಕಛೇರಿಯಲ್ಲಿ ಸಭೆ ಕರೆದಿದ್ದರು ಅದರಲ್ಲಿ ಆದದ್ದು ಮುಂದಿನ ಪೋಸ್ಟ್ನಲ್ಲಿ ಹಾಕ್ತೀನಿ



Tuesday, December 11, 2012

ಪೆದ್ದಚೆರುವಿನ ರಾಕ್ಷಸ ಇದು ಕೆನತ್ ಆಂಡರ್ಸನ್ ರ ಬೇಟೆ ಕಥೆಗಳು ಇವನ್ನ

 ಕನ್ನಡಕ್ಕೆ ನಮ್ ಕೆ ಪಿ ತೇಜಸ್ವಿ ಭಾವಾನುವಾದ ಮಾಡಿರೋ ಪುಸ್ತಕಗಳಲ್ಲಿ 

ಇದು ಒಂದು ಈ ಪುಸ್ತಕದಲ್ಲಿ ಒಟ್ಟು 3 ಕಥೆಗಳಿವೆ 1 ಪೆದ್ದಚೆರುವಿನ ನರಭಕ್ಷಕ 2

ತಾಳವಾಡಿಯ ಮೂಕರಾಕ್ಷಸ 3 ಲಕ್ಕವಳ್ಳಿಯ ಹೆಬ್ಬುಲಿ ಈ ಮೂರು ಕಥೆಗಳು 

ಮನುಷ್ಯ ಮತ್ತು ಬೇರೆ ಕಾರಣಗಳಿಂದ ಬೇಟೆಯಾಡಲು ಅಶಕ್ತವಾಗುವ ಈ 

ಮಾಂಸಹಾರಿ ಪ್ರಾಣಿಗಳು ಕೆಲವು ಬಾರಿ ಮನುಷ್ಯರನ್ನು ಬೇಟೆಯಾಡಿ ತಿಂದು 

ನರಭಕ್ಷಕಗಳಾಗಿ ಪರಿವರ್ತನೆಯಾಗಿ ಜನರಿಗೆ ತೊಂದರೆ ಮಾಡಿದಾಗ 

ಅವನ್ನು ಅನಿವಾರ್ಯವಾಗಿ ಕೆನತ್ ಬೇಟೆಯಾಡುತ್ತಾರೆ. ಬರಿ 

ಬೇಟೆಯಾಡೋದೆ ಅಲ್ಲದೇ ಆ ಪ್ರಾಣಿಗಳ ಜೀವನ ಕ್ರಮವನ್ನು ತುಂಬಾ 

ರೋಮಾಂಚನ ಭರಿತವಾಗಿ ಬರೆಯುತ್ತಾರೆ ಈ ಕಥೆಗಳನ್ನು ನಮ್ ತೇಜಸ್ವಿ 

ಅನುವಾದಿಸಿದ್ದಾರೆ ಈ ಪುಸ್ತಕಗಳು ಸಿಕ್ರೆ ಓದಿ


Friday, June 22, 2012

My Photos

kelagiruva magu Photo Nanna akkana magandu  
Avna hesaru  Vivekananda ( Deekshith)
Now his age 15 months 







Sunday, November 13, 2011












These All Photos A am Taking One village Name was Rameshwara 
this village have one Tank may be 25 to 30 acre tank but its emcrouch and some water Plants aquring that tank that village people take strong disission they can save that tank 



Monday, February 14, 2011

ಆತ್ಮಿಯ ಸ್ನೇಹಿತ ಸ್ನೇಹಿತೆಯರಿಗೆ ಪ್ರೇಮಿಗಳ ದಿನದ ಶುಭಾಶಯಗಳು



Sunday, February 6, 2011